Boat Gets Stuck In Cauvery River At Dubare Elephant Camp | Public TV

2022-07-09 20

Boat Gets Stuck In Cauvery River At Dubare Elephant Camp | Public TV

#publictv #dubare

ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಕುಶಾಲನಗರ ಸಮೀಪದ ದುಬಾರೆಯಲ್ಲಿ ದೊಡ್ಡ ಅನಾಹುತವೇ ತಪ್ಪಿದೆ. ಅಪಾಯಮಟ್ಟ ಮೀರಿ ಹರಿಯುತ್ತಿರೋ ಕಾವೇರಿ ನದಿ ಮಧ್ಯೆ ಬೋಟ್‌ನಲ್ಲಿ ಸಿಲುಕಿದ ಪ್ರಸಂಗ ನಡೆದಿದೆ.

ತುಂಬಿ ಹರಿಯುತ್ತಿರೋ ಕಾವೇರಿ ನದಿಯ ಮಧ್ಯೆ 10ಕ್ಕೂ ಹೆಚ್ಚು ಜನರಿದ್ದ ಬೋಟ್ ತಾಂತ್ರಿಕದೋಷದಿಂದ ಕೈಕೊಟ್ಟಿತ್ತು. ನಡು ನದಿಯಲ್ಲಿ ಇದ್ದ ಮರದ ಕೊಂಬೆ ಹಿಡಿದು ಜನ ಸಹಾಯಕ್ಕೆ ಅಂಗಲಾಚಿದ್ರು. ಕಡೆಗೆ ಮತ್ತೊಂದು ಬೋಟ್ ಹಾಗೂ ಸ್ಥಳೀಯರ ಸಹಕಾರದಿಂದ ರಕ್ಷಣೆ ಮಾಡಲಾಯ್ತು.

ಕೊಡಗು ಜಿಲ್ಲೆಯಲ್ಲಿ ಅಲ್ಲಲ್ಲಿ ಭೂಕುಸಿತ ಆಗ್ತಿದೆ. ಸತತ ಮಳೆಗೆ ಒಂದನೇ ಮೊಣ್ಣಂಗೇರಿ ಗ್ರಾಮದಲ್ಲಿ ಮನೆ ಕುಸಿದಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿದೆ. ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿ ಮೊಣ್ಣಂಗೇರಿಯಲ್ಲಿ ಕಾಫಿತೋಟ ಸಂಪೂರ್ಣ ಭೂಸಮಾಧಿಯಾಗಿದೆ. ಭಾರೀ ಮಳೆಯಿಂದ ಭೂಕುಸಿತ ಆತಂಕ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ.